ಉಮೇಶ್ ಯಾದವ್ ಬೌಲಿಂಗ್‌ ದಾಳಿಗೆ ಪಂಜಾಬ್ ತತ್ತರ: ಆರ್‌ಸಿಬಿಗೆ ಭರ್ಜರಿ ಗೆಲುವು

ಇಂದೋರ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮತ್ತೊಂದು ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿದೆ. ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಪಾರ್ಥಿವ್ ಪಟೇಲ್ ಅವರ ಬಿರುಸಿನ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ.

ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಒಡ್ಡಿದ 89 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 94 ರನ್ ಗಳಿಸುವ ಮೂಲಕ ಜಯದ ನಗೆ ಬೀರಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡಕ್ಕೆ ಉಮೇಶ್ ಯಾದವ್ ಆರಂಭಿಕ ಆಘಾತ ನೀಡಿದರು. 15 ಎಸೆತದಲ್ಲಿ 21 ರನ್‌ ಗಳಿಸಿದ್ದ ಲೋಕೇಶ್ ರಾಹುಲ್ ಅವರು ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಡಿ ಗ್ರ್ಯಾಂಡ್ಹೋಮ್‌ಗೆ ಕ್ಯಾಚಿತ್ತರು. ಇನ್ನೂ ಅದೇ ಓವರ್‌ನಲ್ಲಿ ಕ್ರಿಸ್ ಗೇಲ್ ಕೂಡ 18 ರನ್ ಬಾರಿಸಿ ಸಿರಾಜ್‌ಗೆ ಕ್ಯಾಚಿತ್ತರು. 88 ರನ್ ಗಳನ್ನಷ್ಟೇ ದಾಖಲಿಸಲು ಶಕ್ತರಾದ ಪಂಜಬ್ ಬ್ಯಾಟ್ಸ್ ಮನ್ ಗಳು ಐಪಿಎಲ್-2018 ರ ಆವೃತ್ತಿಯಲ್ಲೇ 2 ನೇ ಅತ್ಯಂತ ಕನಿಷ್ಠ ರನ್ ಗಳಿಸಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಒಡ್ಡಿದ 89 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 94 ರನ್ ಗಳಿಸುವ ಮೂಲಕ ಜಯದ ನಗೆ ಬೀರಿದೆ. ತಂಡದ ನಾಯಕ ವಿರಾಟ್ ಕೊಹ್ಲಿ 28 ಎಸೆತದಲ್ಲಿ 48 ರನ್ ಪೆರಿಸಿದರೆ, ಪಾರ್ಥಿವ್ ಪಟೇಲ್ 22 ಎಸೆತದಲ್ಲಿ 40 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು.

Leave a Reply

Your email address will not be published. Required fields are marked *