ಕಚ್ಚಾತೈಲ ಬೆಲೆ ಏರಿಕೆ: ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಹೆಚ್ಚಳ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ 19 ದಿನಗಳಿಂದ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಹೆಚ್ಚಿಸದಿದ್ದ ತೈಲ ಕಂಪನಿಗಳು ಮತದಾನ ಮುಗಿಯುತ್ತಿದ್ದಂತೆ ಬೆಲೆ ಏರಿಕೆ ಮಾಡಿವೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೋಮವಾರ ಪೆಟ್ರೋಲ್​ ಬೆಲೆಯನ್ನು ಪ್ರತೀ ಲೀಟರ್​ಗೆ 17 ಪೈಸೆ ಮತ್ತು ಡೀಸೆಲ್​ ಬೆಲೆ 21 ಪೈಸೆ ಏರಿಕೆಯಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್​ 24 ರಿಂದ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಶನಿವಾರ (ಮೇ. 12) ಮತದಾನ ಮುಗಿಯುತ್ತಿದ್ದಂತೆ ತೈಲ ಕಂಪನಿಗಳು ಮೊದಲಿನಂತೆ ತೈಲ ಬೆಲೆ ಪರಿಷ್ಕರಿಸಲು ನಿರ್ಧರಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಮತ್ತು ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತ ಕಂಡ ಹಿನ್ನೆಲೆಯಲ್ಲೆ ಕಳೆದ 3 ವಾರದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂದಾಜು 500 ಕೋಟಿ ರೂ. ನಷ್ಟ ಅನುಭವಿಸಿವೆ.

Leave a Reply

Your email address will not be published. Required fields are marked *