ಚಂದ್ರಯಾನ-2 ಉಡಾವಣೆ ಮುಂದೂಡಿಕೆ

ನವದೆಹಲಿ: ಇದೇ ತಿಂಗಳಲ್ಲಿ ಉಡಾವಣೆಯಾಗಬೇಕಿದ್ದ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಉಡಾವಣೆ ಅಕ್ಟೋಬರ್ – ನವೆಂಬರ್ ತಿಂಗಳಿಗೆ ಮುಂದೂಡಿಕೆಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ ಶಿವನ್ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.

ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಚಂದ್ರಯಾನ-2 ಉಡಾವಣೆ ಮಾಡಲಾಗುವುದು ಎಂದು ಶಿವನ್ ಅವರು ಇಂದು ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ತಿಳಿಸಿರುವುದಾಗಿ ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಚಂದ್ರಯಾನ – 2 ಉಡಾವಣೆ ಮಾಡುವ ಮುನ್ನ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸುವಂತೆ ರಾಷ್ಟ್ರ ಮಟ್ಟದ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ. ಈ ಹಿನ್ನೆಲೆ ಚಂದ್ರಯಾನ ಉಡಾವಣೆ ಮುಂದೂಡಲಾಗಿದೆ ಎನ್ನಲಾಗಿದೆ.

ಚಂದ್ರಯಾನ-2 ನಲ್ಲಿ ಇಸ್ರೋ, ಗ್ರಹವೊಂದರ ಮೇಲ್ಮೈನಲ್ಲಿ ಉರುಳುತ್ತ ಮಾದರಿಯನ್ನು ಸಂಗ್ರಹಿಸುವ ‘ರೋವರ್‌’ ಎಂಬ ತಂತ್ರಜ್ಞಾನವನ್ನುಇದೇ ಮೊದಲ ಬಾರಿಗೆ ಬಳಕೆ ಮಾಡುತ್ತಿದೆ. ಭೂಮಿಯ ಉಪಗ್ರಹ ಚಂದ್ರನ ಅಂಗಳಕ್ಕೆ ಇಸ್ರೋ ಕಳುಹಿಸುತ್ತಿರುವ 2ನೇ ಉಪಗ್ರಹ ಇದಾಗಿದೆ.

Leave a Reply

Your email address will not be published. Required fields are marked *