ಚಲನಚಿತ್ರ ನಿರ್ದೇಶಕ ಪಿ.ಎನ್. ಸತ್ಯ ಅನಾರೋಗ್ಯದಿಂದ ನಿಧನ

ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪಿಎನ್ ಸತ್ಯ ಶನಿವಾರ ನಿಧನರಾಗಿದ್ದಾರೆ.

ಸತ್ಯ ಅವರಿಗೆ ನಾಗರಬಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡಬಂದ ಹಿನ್ನೆಲೆಯಲ್ಲಿ ಶುಕ್ರವಾರ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಶನಿವಾರ ಸಂಜೆ ಲೋ ಬಿಪಿ ಆಗಿ ಕೊನೆಯುಸಿರೆಳೆದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮೆಜೆಸ್ಟಿಕ್ ಚಿತ್ರ ದೊಡ್ಡ ಬ್ರೇಕ್ ನೀಡಿತ್ತು. ಈ ಚಿತ್ರದ ಮೂಲಕ ಪಿಎನ್ ಸತ್ಯ ಹಾಗೂ ದರ್ಶನ್ ಗಾಂಧಿನಗರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.

ಮೆಜೆಸ್ಟಿಕ್, ಡಾನ್, ದಾಸ, ಸರ್ದಾರ, ಶಾಸ್ತ್ರಿ ಮತ್ತು ಮರಿ ಟೈಗರ್, ಉಡೀಸ್, ತಂಗಿಗಾಗಿ, ಗೂಳಿ, ಕೆಂಚ, ಹ್ಯಾಟ್ರಿಕ್ ಹೊಡಿ ಮಗ, ಸುಗ್ರೀವ, ಪಾಗಲ್, ಜೇಡರಹಳ್ಳಿ, ಶಿವಾಜಿನಗರ, ಬೆಂಗಳೂರು ಅಂಡರ್‌ವರ್ಲ್ಡ್‌ ಮತ್ತು ಮರಿ ಟೈಗರ್ ಸಹಿತ 16 ಚಿತ್ರಗಳನ್ನು ನಿರ್ದೇಶಿಸಿದ್ದರು. ಜತೆಗೆ 21 ಚಿತ್ರಗಳಲ್ಲಿ ನಟಿಸಿದ್ದರು.

Leave a Reply

Your email address will not be published. Required fields are marked *