ಜಡೇಜಾ, ಹರ್ಭಜನ್ ಸಿಂಗ್ ದಾಳಿಗೆ ಬೆಂಗಳೂರು ತಂಡ ತತ್ತರ: ಚೆನೈ ವಿರುದ್ಧ ಹೀನಾಯವಾಗಿ ಸೋತ ಆರ್‌ಸಿಬಿ

ಪುಣೆ: ಐಪಿಎಲ್ 11ನೇ ಆವೃತ್ತಿಯ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ ಗಳಿಂದ ದಯನೀಯ ಸೋಲು ಕಂಡಿದೆ.

ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಅಲ್ಪಮೊತ್ತಕ್ಕೆ ಔಟಾಗಿದ್ದರಿಂದ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಪೇರಿಸಿತ್ತು.

ಆರ್‌ಸಿಬಿ ನೀಡಿದ 128 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ 4 ವಿಕೆಟ್ ಗೆ 128 ರನ್ ಬಾರಿಸುವ ಮೂಲಕ ಗೆಲುವು ಸಾಧಿಸಿತು.

ಆರ್‌ಸಿಬಿ ಪರ ಪಾರ್ಥಿವ್ ಪಟೇಲ್ 53 ಮತ್ತು ಟೀಮ್ ಸೌಥಿ 36 ರನ್ ಗಳಿಸಿದ್ದಾರೆ. ಚೆನ್ನೈ ಪರ ಬೌಲಿಂಗ್ ನಲ್ಲಿ ರವೀಂದ್ರ ಜಡೇಜಾ 3, ಹರ್ಭಜನ್ ಸಿಂಗ್ 2 ವಿಕೆಟ್ ಪಡೆದಿದ್ದಾರೆ. ಚೆನ್ನೈ ಪರ ಅಂಬಟ್ಟಿ ರಾಯುಡು 32, ಸುರೇಶ್ ರೈನಾ 25, ಎಂಎಸ್ ಧೋನಿ ಅಜೇಯ 31 ರನ್ ಬಾರಿಸಿದ್ದಾರೆ.

ಆರ್’ಸಿಬಿ ಬ್ಯಾಟಿಂಗ್ ವೈಫಲ್ಯ: ಎಲ್ಲಾ ವಿಭಾಗಗಳಲ್ಲೂ ತನ್ನ ಕಳಪೆ ಪ್ರದರ್ಶನ ಮುಂದುವರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಶನಿವಾರದ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ.

ಮಹಾರಾಷ್ಟ್ರದ ಕ್ರಿಕೆಟ್‌‌ ಅಸೋಶಿಯೇಷನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ನಡೆಸಿದ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಪಟಪಟನೆ ವಿಕೆಟ್‌ ಕಳೆದುಕೊಂಡಿತು. ವಿಶೇಷ ಎಂದರೆ,  ಪ್ರಮುಖ 8 ಬ್ಯಾಟ್ಸ್‌‌ಮನ್‌ಗಳ ಬ್ಯಾಟ್‌ನಿಂದ ಹೊರ ಬಂದ ರನ್‌ ಗಳ ಮೊತ್ತ  ಕೇವಲ 34ರನ್‌. ಅದು ‘5,8,1,7,8,1,1,3’ ಈ ರೀತಿಯಾಗಿತ್ತು  ಬೆಂಗಳೂರು ಸ್ಕೋರ್‌ ಕಾರ್ಡ್‌.

ಆರಂಭಿಕ ಪಾರ್ಥಿವ್ ಪಟೇಲ್ (53) ಅರ್ಧಶತಕ  ಹಾಗೂ ಟಿಮ್ ಸೌಥಿ (36*) ಹೊರತು ಪಡಿಸಿ ಉಳಿದ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಪಾರ್ಥಿವ್ ಪಟೇಲ್ 53ರನ್‌, ಬ್ರೆಂಡನ್ ಮೆಕಲಮ್ 5ರನ್‌, ವಿರಾಟ್ ಕೊಹ್ಲಿ 8 ರನ್‌, ಎಬಿಡಿ ವಿಲಿಯರ್ಸ್ 1ರನ್‌,  ಮನ್‌ದೀಪ್ ಸಿಂಗ್ 7ರನ್‌,  ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 8ರನ್‌,  ಮುರುಗನ್ ಅಶ್ವಿನ್ 1ರನ್‌, ಟಿಮ್ ಸೌಥಿ ಅಜೇಯ36ರನ್‌,  ಉಮೇಶ್ ಯಾದವ್ 1ರನ್‌ ಹಾಗೂ ಮೊಹಮ್ಮದ್ ಸಿರಾಜ್ 3ರನ್‌ಗಳಿಸಿ ಒಟ್ಟಾರೆ 127 ರನ್‌ ಗಳಿಸುವಷ್ಟರಲ್ಲಿ ಆರ್‌ಸಿಬಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು, ಪಾರ್ಥಿವ್ ಪಟೇಲ್ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ಉಳಿದು ಬೆಂಗಳೂರಿನ ಮಾನ ಉಳಿಸಿದರು.

ನಿಗದಿತ 20 ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ ಅಂತಿಮವಾಗಿ ಎದುಸಿರು ಬಿಡುತ್ತ ತಂಡ ಗಳಿಸಿದ ಮೊತ್ತ ಜಸ್ಟ್‌ 127ರನ್‌.  ಆ ಮೂಲಜ ಅಂತಿಮವಾಗಿ ಎದುರಾಳಿ ಸಿಎಸ್‌ಕೆ 128 ರನ್‌ಗಳ  ಗೆಲುವಿನ ಗುರಿ ನೀಡಿತು.

Tags: , ,

Leave a Reply

Your email address will not be published. Required fields are marked *