ನಮ್ಮ ಬಗ್ಗೆ

 

ಅತಿ ವೇಗವಾಗಿ ಬದಲಾಗುತ್ತಿರುವ ಸುದ್ದಿಮಾಧ್ಯಮ ಹಾಗೂ ಮಾಹಿತಿ ಕ್ಷೇತ್ರಗಳಲ್ಲಿ ಇಂದಿನ ವೃತ್ತ ಪತ್ರಿಕೆಗಳು ಮತ್ತು ನಿಯತಕಾಲಿಕಗಳು ಯುವ ಪೀಳಿಗೆಯ ಆಶಯ, ಆಲೋಚನೆಗಳಿಗೆ ಸಾಕಾಗುವುದಿಲ್ಲವೇನೋ ಎಂಬ ಅಳುಕಿಗೆ ಉತ್ತರವಾಗಿ ಈ ಅಂತರ್ಜಾಲ ಸುದ್ದಿ ಪತ್ರಿಕೆ ರೂಪುಗೊಂಡಿದೆ. ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್‍ಗಳ ಮುಖಾಂತರ ಡಿಜಿಟಲ್ ಮಾದ್ಯಮದಲ್ಲಿ ಕ್ಷಣ-ಕ್ಷಣಕ್ಕೂ ಹೊಸತಾಗಬಲ್ಲ ಸುದ್ದಿ ತಾಣವಾಗಿ ಹಾಗೂ ಯುವಪೀಳಿಗೆಯನ್ನು ಕೇಂದ್ರೀಕರಿಸಿಕೊಂಡು ಚರ್ಚಾ ವೇದಿಕೆಯಾಗಿ ‘ನಮ್ಮ ನಮಸ್ಕಾರ’ ವೆಬ್‍ಪತ್ರಿಕೆ ಹೊರಬಂದಿದೆ. ವಾಣಿಜ್ಯೀಕರಣಗೊಂಡ ಮುದ್ರಣ ಮಾಧ್ಯಮ ಹಾಗೂ ಟಿಆರ್‍ಪಿ ದಾಸ್ಯದ ದೃಶ್ಯ ಮಾಧ್ಯಮಗಳ ಹಂಗಿನಿಂದ ಬಿಡುಗಡೆ ಪಡೆದು ಸುಲಭ, ಸರಳ, ನೇರ ಹಾಗೂ ತಾಜಾ ಸುದ್ದಿ ಮಾಧ್ಯಮವಾಗಿ ನಿಮ್ಮ ಕಂಪ್ಯೂಟರ್ ತೆರೆಯಲ್ಲಿ ಹಾಗೂ ಸ್ಮಾರ್ಟ್ ಫೋನ್ ಬೆರಗಲ್ಲಿ ಈ ‘ಜಾಣ ಪತ್ರಿಕೆ’ (SMART PAPER ON A SMART DEVICE) ಮೂಡಿಬಂದಿದೆ. ಈ ಜಾಣ ಪತ್ರಿಕೆಯಲ್ಲಿ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಖಲಿಸುವುದರ ಜೊತೆಗೆ ಬದಲಾವಣೆಯ ಆಶಯಗಳಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶವಿದೆ.

ಕರ್ನಾಟಕದ ಯುವಪೀಳಿಗೆಯ ಆಶೊತ್ತರಗಳನ್ನು ಪ್ರತಿನಿಧಿಸುತ್ತಿರುವ ಶ್ರೀ ಬಸವರಾಜ ಬೊಮ್ಮಾಯಿಯವರು ಈ ಡಿಜಿಟಲ್ ಸುದ್ದಿ ಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರ ಜೊತೆಯಲ್ಲಿ ಕರ್ನಾಟಕದ ಜಾಣ್ಮನಗಳ ಸಂಗಾತಿ ಬಳಗ ಹಾಗೂ ವೃತ್ತಿ ನಿರತ  ಹಲವಾರು ಹಿರಿ-ಕಿರಿಯ ಪತ್ರಿಕೋಲ್ಲಾಸಿಗಳಿದ್ದಾರೆ.