ಪಾಸ್’ಪೋರ್ಟ್’ಗಳಲ್ಲಿ ಕನ್ನಡ ಬಳಸುವಂತೆ ಎಸ್.ಜಿ. ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ರಾಜ್ಯದ ಪಾಸ್ ಪೋರ್ಟ್ ಕೇಂದ್ರಗಳಲ್ಲಿ ವಿತರಿಸಲಾಗುವ ಎಲ್ಲಾ ಪಾಸ್ ಪೋರ್ಟ್ ಗಳಲ್ಲಿ ಕನ್ನಡದಲ್ಲಿ ಮಾಹಿತಿ ಇರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಅಧ್ಯಕ್ಷ  ಎಸ್.ಜಿ. ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ.

ಕರ್ನಾಟಕ ಪ್ರಾದೇಶಿಕ ಪಾಸ್ ಪೋರ್ಟ್ ವಿತರಣಾ ಕೇಂದ್ರಗಳಲ್ಲಿ ವಿತರಿಸಲಾಗುವ ಎಲ್ಲಾ ಪಾಸ್ ಪೋರ್ಟ್ ಗಳಲ್ಲಿ ಕನ್ನಡ ಬಳಕೆಯಾಗಬೇಕೆಂದು ಕೆಡಿಎ ಒತ್ತಾಯಿಸಲಿದೆ ಎಂದು ಅವರು ಹೇಳಿದ್ದಾರೆ. “ಪಾಸ್ ಪೋರ್ಟ್  ಮುಖಪುಟ ಹಾಗೆಯೇ ಸ್ಟಾಂಪಿಂಗ್ ಮಾಡಲ್ಪಡುವ ಒಳಪುಟಗಳಲ್ಲಿ ಕನ್ನಡವಿರಬೇಕು. ಅಲ್ಲದೆ ಪಾಸ್ ಪೋರ್ಟ್ ಹೊಂದಿದ ವ್ಯಕ್ತಿಯ ಹೆಸರು, ಮತ್ತಿತರೆ ವಿವರಗಳು ಇಂಗ್ಲಿಷ್ ಜೊತೆಗೆ ಕನ್ನಡದಲ್ಲಿ ಮುದ್ರಿಸಬೇಕು.”ಸಿದ್ದರಾಮಯ್ಯ ಹೇಳಿದ್ದಾರೆ.

ಪಾಸ್ ಪೋರ್ಟ್ ಎನ್ನುವುದು ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಒಂದಾಗಿದ್ದು ವಿದೇಶ ಪ್ರಯಾಣ ಮಾಡುವ ಭಾರತೀಯರಿಗೆ ಇದು ಅಗತ್ಯ ದಾಖಲೆಯಾಗಿದೆ. ವಲಸೆ ಅಧಿಕಾರಿಗಳಿಗೆ ಯಾವುದೇ ಸ್ಥಳೀಯ ಭಾಷೆಗಳ ಪರಿಚಯವಿರುವುದಿಲ್ಲ ಎನ್ನುವ ಕಾರಣಕ್ಕೆ ಪಾಸ್ ಪೋರ್ಟ್ ನಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯ ಹೊರತು ಇನ್ನಾವ ಭಾಷೆ ಬಳಕೆ ಆಗುವುದಿಲ್ಲ.  ಆದರೆ ಸಿದ್ದರಾಮಯ್ಯ ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ಪ್ರಾದೇಶಿಕ ಭಾಷೆಯನ್ನೊಳಗೊಂಡ ಪಾಸ್ ಪೋರ್ಟ್ ವಿತರಿಸುತ್ತದೆ ಇದು ಹೆಮ್ಮೆಯ ಸಂಗತಿಯಾಗಿದೆ. ಈ ಸಂಬಂಧ ಚರ್ಚಿಸಲು ನಾವು ಪಾಸ್ ಪೋರ್ಟ್ ಅಧಿಕಾರಿಗಳನ್ನು ಬೇಟಿಯಾಗಲಿದ್ದೇವೆ ಎಂದಿದ್ದಾರೆ.

ಕೆಡಿಎ ಅಧಿಕಾರ ವಹಿಸಿಕೊಂಡ ಬಳಿಕ ಪ್ರೊ. ಸಿದ್ದರಾಮಯ್ಯ ಅನೇಕ ಕನ್ನಡಪರ ಕಾರ್ಯ ಮಾಡಿದ್ದಾರೆ.. ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳನ್ನು ಭೇಟಿಯಾಗಿದ್ದ ಇವರ ತಂಡ ವಿಮಾನನಿಲ್ದಾಣದ ಪ್ರಕಟಣೆಗಳಲ್ಲಿ  ಕನ್ನಡ ಬಳಕೆಗಾಗಿ ಒತ್ತಾಯಿಸಿದ್ದರು. “ನಾವು ಮನವಿ ಮಾಡಿದ ಬಳಿಕ ಅಧಿಕಾರಿಗಳು ವಿಮಾನ ನಿಲ್ದಾಣದ ಪ್ರಕಟಣೆ ಫಲಕಗಳಲ್ಲಿ ಆಂಗ್ಲ ಹಾಗೂ ಕನ್ನಡ ಭಾಷೆಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಹಿಂಡೆ ಆಂಗ್ಲ ಮತ್ತು ಹಿಂದಿ ಬಾಷೆಗಳಲ್ಲಿ ಪ್ರಕಟಣೆ ಇರುತ್ತಿತ್ತು” ಸಿದ್ದರಾಮಯ್ಯ ತಿಳಿಸಿದರು.

Leave a Reply

Your email address will not be published. Required fields are marked *