ಫುಟ್‌ಪಾತ್ ಹೋಟೆಲ್’ನಲ್ಲಿ ಉಪಹಾರ ಸೇವಿಸಿ, ಬಿಜೆಪಿ ಪರ ಪ್ರಚಾರ ನಡೆಸಿದ ನಟ ಸುದೀಪ್

ಬಳ್ಳಾರಿ: ಫುಟ್‌ಪಾತ್ ಹೋಟೆಲ್’ನಲ್ಲಿ ಉಪಹಾರ ಸೇವಿಸುವ ಮೂಲಕ ನಟ ಕಿಚ್ಚ ಸುದೀಪ್ ಸರಳತೆ ಮೆರೆದಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್‌ ರೆಡ್ಡಿ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಸುದೀಪ್‌, ಫುಟ್‌ಪಾತ್ ಮೇಲೆ ಟಿಫಿನ್ ಸೇವಿಸುವ ಮೂಲಕ ತಮ್ಮ ಸರಳತೆ ಮೆರೆದರು.

ಬಳ್ಳಾರಿಯಿಂದ-ಮೊಳಕಾಲ್ಮೂರಿಗೆ ಹೊರಡಬೇಕಾದರೆ ಆಂಧ್ರಪ್ರದೇಶದ ಗಡಿಭಾಗದ ಫುಟ್‌ಪಾತ್‌ ಹೋಟೆಲ್‌ಗೆ ತೆರಳಿದ ಅವರು ಟಿಫಿನ್‌ ತಿಂದರು.  ಟೆಂಟ್ ಹೊಟೇಲ್‌‌ನಲ್ಲಿ ಟಿಫೀನ್‌ ಮಾಡಿ, ಹೋಟೆಲ್ ಮಲೀಕರಿಗೆ ಒಂದಷ್ಟು ಹಣನೀಡಿದರು, ನಂತರ ಟೀ‌ ಕುಡಿದ ಸುದೀಪ್‌ ಕೆಲಕಾಲ ಟೆಂಟ್‌ನಲ್ಲೇ ಕಾಲ ಕಳೆದು ಮೊಳಕಾಲ್ಮೂರಿನತ್ತ ತೆರಳಿದರು.

ಸಾರ್ವಜನಿಕರೊಂದಿಗೆ ಫುಟ್‌ಪಾತ್‌ ಹೊಟೇಲ್‌ನಲ್ಲಿ ಟಿಫಿನ್ ಮಾಡುವ ಮೂಲಕ ಸರಳತೆ ಮೆರೆದ ಕಿಚ್ಚನ ಕಾರ್ಯಕ್ಕೆ ಅಭಿಮಾನಿಗಳು ಮನಸೋತರು. ಕೆಲವರು ಫೋಟೋ ತೆಗೆದು ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು.

Leave a Reply

Your email address will not be published. Required fields are marked *