ಮತದಾನ ಮಾಡಿದ ಪುನೀತ್ ರಾಜ್’ಕುಮಾರ್: ಎಲ್ಲರೂ ಓಟ್ ಮಾಡುವಂತೆ ಮನವಿ

ಬೆಂಗಳೂರು: ನಗರದಲ್ಲಿ ಸಿನಿಮಾ ತಾರೆಯರು ತಮ್ಮ ಹಕ್ಕು ಚಲಾಯಿಸಿದರು. ನಟರಾದ ಧ್ರುವ ಸರ್ಜಾ, ಪುನೀತ್‌ ರಾಜ್‌ಕುಮಾರ್, ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ತಮ್ಮ ಕ್ಷೇತ್ರದಲ್ಲಿ ಹಕ್ಕು ಚಲಾಯಿಸಿದರು.

ಈ ವೇಳೆ ಮಾತನಾಡಿದ ಪುನೀತ್‌ ರಾಜ್‌ ಕುಮಾರ್, ಸಂಜೆ 6 ಗಂಟೆ ತನಕ ಓಟ್ ಮಾಡಲು ಅವಕಾಶ ಇದೆ. 18 ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ಎಂದರು.

18 ವರ್ಷದಿಂದ ಮತದಾನ ಮಾಡಿದ್ದು, ಇಲ್ಲಿಯ ತನಕ ಒಂದು ಚುನಾವಣೆಯಲ್ಲಿ ಮಾತ್ರ ಮತದಾನ ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದ ಅಭಿವೃದ್ದಿಗೆ ಪ್ರತಿ ಓಟ್ ಕೂಡ ಅಮೂಲ್ಯ. ನೀವು ಎಲ್ಲೆ ಇದ್ರು ತಪ್ಪದೆ ಮತ ಹಾಕಿ ಅಂತ ಸಂದೇಶ ರವಾನೆ ಮಾಡಿದರು.

ಇನ್ನು ಬೆಂಗಳೂರಿನ ಶಾಸ್ತ್ರಿ ನಗರದಲ್ಲಿರುವ ಆತ್ಮಶ್ರೀ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಬಂದು ನಟರಾದ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಮತದಾನ ಮಾಡಿದರು.

ಹೊಸಕೆರೆಹಳ್ಳಿಯಲ್ಲಿ ನಟ ರಾಕಿಂಗ್‌ ಸ್ಟಾರ್‌ ಯಶ್‌ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮಳೆ ಬರುವ ಮುನ್ನ ಬಂದು ಮತ ಹಾಕಿ ಬಿಡಿ ಸಂಜೆ 6 ಗಂಟೆಯವರೆಗೆ ಸಮಯ ಇದೆ ಅಂತ ಕೂರಬೇಡಿ, ಮಳೆ ಬರುವ ಹಾಗಿದೆ ಬೇಗ ಬಂದು ಹಕ್ಕು ಚಲಾಯಿಸಿ ಎಂದರು.

ಮತ ಚಲಾಯಿಸಿಲ್ಲ ಅಂದರೆ ನಾವು ಹಕ್ಕು ಕಳೆದುಕೊಂಡಂತೆ. ಮತ ಹಾಕಿದರೆ ಮಾತನಾಡುವ ಹಕ್ಕು ಬರುತ್ತದೆ. ಮತ ಚಲಾಯಿಸದೇ ಇದು ಸರಿಯಿಲ್ಲ, ಅದು ಸರಿಯಿಲ್ಲ ಎಂದು ಹೇಳುವ ಸ್ವಾತಂತ್ರ್ಯ ನಮಗೆ ಇರುವುದಿಲ್ಲ. ಮೊದಲೇ ನಾವು ಎಲ್ಲರಿಗೂ ಮಾದರಿಯಾಗಬೇಕು. ನಮ್ಮ ಹಕ್ಕು ನಾವು ಚಲಾಯಿಸಿ ಬಿಡಬೇಕು ನಂತರ ಉಳಿದ ವಿಚಾರ ಮಾತನಾಡಬೇಕು ಎಂದು ಸಲಹೆ ಇತ್ತರು.

ಇದುವರೆಗೂ ಮತ ಹಾಕದವರು ಬೇಗ ಬಂದು ಮತದಾನ ಮಾಡುವುದು ಒಳ್ಳೆಯದು. ಮತದಾನ ಅತ್ಯಂತ ಪ್ರಮುಖ ಕರ್ತವ್ಯ. ಅದನ್ನೇ ಮರೆಯಬೇಡಿ ಎಂದು ಕರೆಕೊಟ್ಟರು.

Leave a Reply

Your email address will not be published. Required fields are marked *